ಹೊರಗಣ ಪ್ರಾಕಾರದ ಬಡಗಣ ಮೂಡಣ ಹೆಬ್ಬಾಗಿಲುಗಳಿಗೆ ಎದುರಾಗಿ ಒಳಗಣ ಪ್ರಾಕಾರಕ್ಕೂ ಹೆಬ್ಬಾಗಿಲುಗಳು ಇದ್ದವು. ಒಂದು ಬಾಗಿಲಿನಿಂದ ಎದುರು ಬಾಗಿಲಿಗೆ ಐವತ್ತು ಮೀಟರ್ ಅಳೆದನು.